00:00:00
TRENDING LATEST UPDATES BIG STORY
Published: ⏱️ 21 Jul 2026, 06:05 PM IST | By venkat raj (Writer)

No School Bag Day

NoBagDay

*Article* *ಲೇಖಕ*: *ವೆಂಕಟರಾಜ*

*NO SCHOOL BAG DAY*

#NOBAGDAY

ವಿದ್ಯಾರ್ಥಿಗಳಿಗೆ ವಿದ್ಯೆ ಎಂದು ಹೊರೆಯಲ್ಲ.

ವಿದ್ಯೆ ಕಲಿಕೆಗೆ ಹೊತ್ತು ತರುವ

ಪುಸ್ತಕ ಭಂಡಾರಗಳ ಬ್ಯಾಗ್ ಹೊರೆ.

ಮುಂದಿನ ದಿನಗಳಲ್ಲಿ ಬ್ಯಾಗ್ ಮಕ್ಕಳಿಗೆ ಹೊರಲಾಗದ ಹೊರೆಯಾಗಿ ಮಾರ್ಪಾಡು

ಆಗುವುದರಲ್ಲಿ ಸಂದೇಹವಿಲ್ಲ.

ಈಗಾಗಲೇ ಹೊರೆಯ ಪರಿಣಾಮ

ಮಕ್ಕಳ ಬೆನ್ನು ಬಾಳೆ ಮರದ ಹಾಗೆ ಬಾಗಿ

ಬೆನ್ನು ಮೂಳೆ ಬಳಲುವಂತಿದೆ.

ಪ್ರಸ್ತುತ ಪರಿಸ್ಥಿತಿ ಮುಂದುವರಿದರೆ

ಗಂಭೀರ ಆರೋಗ್ಯ ಸಮಸ್ಯೆಗಳು ಮಕ್ಕಳು ಅನುಭವಿಸಬಹುದು.

ಇಂತಹ ಸೂಕ್ಷ್ಮ ಅಪಾಯಗಳನ್ನು

ವಿದ್ಯಾಸಂಸ್ಥೆಗಳು ಅರ್ಥೈಸಿಕೊಂಡು

ಬ್ಯಾಗಿನ ಹೊರೆಯನ್ನು ಕಡಿಮೆ ಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಲೇ ಬೇಕು.

ಇದಕ್ಕೆ ಪೂರಕಕ ತಕ್ಕಂತೆ

*ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು* (National curriculum framework) ಸ್ಥಾಪಿತ(#NCF2005) ಇದರ ಅಡಿಯಲ್ಲಿ No school bag day ನಿಯಮ ನಿರ್ದೇಶನ ಅತ್ಯಂತ ಪರಿಣಾಮಕಾರ ಆಗಿದೆ.

ಈ ನೀತಿಯ ಪ್ರಮುಖ ಉದ್ದೇಶವೆಂದರೆ

ಮಕ್ಕಳಲ್ಲಿ ಹೊಸ ಚೈತನ್ಯ ಮತ್ತು ಸೃಜನಾತ್ಮಕ ಚಟುವಟಿಕೆಗಳು ಇಮ್ಮುಡಿ ಯಾಗಿ ಆತ್ಮ ವಿಶ್ವಾಸ ಜೋತೆಗೆ ಶಾಲೆಯ ಮೇಲಿನ ಒಲವು ಮೂಡಲೆಂದು.

ನೀತಿಯ ಸಾರ ಅರ್ಥೈಸಿಕೊಂಡ ದೇಶದ ಕೆಲವು ಬೆರಳೆಣಿಕೆಯ ರಾಜ್ಯಗಳು ವರ್ಷಕ್ಕೊಮ್ಮೆ ಆಚರಿಸುತ್ತಿದೆ.

ಇದರಲ್ಲಿ ಪ್ರಮುಖವಾಗಿ ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು ಮತ್ತು ಆಂಧ್ರಪ್ರದೇಶ ಕಡೆ ಆಚರಣೆ ಜಾರಿ ಇದೆ.

ಈ ನೀತಿಯ ಪರಿಣಾಮಕಾರಿ ಯನ್ನು

ಉಳಿದ ಎಲ್ಲಾ ರಾಜ್ಯಗಳ ವಿದ್ಯಾಸಂಸ್ಥೆಗಳು ಅಳವಡಿಸಿಕೊಂಡು

ಮಕ್ಕಳ ಚೈತನ್ಯ, ಸೃಜನಶೀಲತೆ, ಆತ್ಮವಿಶ್ವಾಸ ಬೆಳವಣಿಗೆಗೆ ಅವಕಾಶ ಮಾಡಿಕೊಡಬೇಕು.

ನನ್ನ ಅನಿಸಿಕೆ ,ಅಭಿಪ್ರಾಯ ವೆನಂದರೆ

ಇಂತಹ ಪರಿಣಾಮ ಯೋಜನೆ ವರ್ಷಕ್ಕೊಮ್ಮೆ ಬದಲಾಗಿ ತಿಂಗಳಿಗೆ ಒಮ್ಮೆ ಜಾರಿ ಉತ್ತಮ. ಮತ್ತು ಉಳಿದ ದಿನಗಳ ಪಠ್ಯ ಪುಸ್ತಕ ಬ್ಯಾಗ್ ನ ಹೊರೆ ಕಡಿಮೆಗೆ ಸಹಾಯಕ ನೀತಿ ಯೋಜನೆಗಳ ಅವಶ್ಯಕತೆ ಇದೆ.

✍ *ವೆಂಕಟರಾಜ*

💬 Reader Discussion
ಕರಾವಳಿಯ ಮಣ್ಣಿನ ವಾಸನೆಗೆ ಜಗತ್ತೇ ಫಿದಾ: ಸ್ಯಾಂಡಲ್‌ವುಡ್‌ನಲ್ಲಿ ಕರಾವಳಿ ಸಿನಿಮಾಗಳ ಹೊಸ ಶಕೆ!
By venkat raj Read Story →
​ಚಾಮರಾಜನಗರದ ಪ್ರತಿಭಾನ್ವಿತ ಕಲಾವಿದ ನಟ ಪ್ರವೀಣ್ ಮತ್ತು 'ರೆಟ್ರೋ ರೋಮಿಯೋ' ಜಾದೂ
By Sachin Raj Read Story →
ವಿದ್ಯಾರ್ಥಿಗಳ ಹೋರಾಟಕ್ಕೆ ಬಿಗ್ ಸಕ್ಸಸ್: ಶಿಕ್ಷಣ ಸಚಿವರ ರಾಜೀನಾಮೆ, ಬೀದಿಗಿಳಿದು ಸಂಭ್ರಮಿಸಿದ ಯುವಜನತೆ!
By Sachin Raj Read Story →
ಜನಾ ನಾಯಕನ್ ಮೊದಲ ದಿನದ ಕಲೆಕ್ಷನ್: ದಳಪತಿ ವಿಜಯ್ ಅವರ ಕೊನೆಯ ಚಿತ್ರದ ಬೃಹತ್ ಓಪನಿಂಗ್, ವಿಶ್ವಾದ್ಯಂತ ₹78 ಕೋಟಿ ಗಳಿಕೆ!
By Sachin Raj Read Story →