
ಮಲೆನಾಡು ಘಟ್ಟ ಪ್ರದೇಶ ದ ಮಳೆಯ ಅನಾವರಣ
*Article* *ಲೇಖಕ*:*ವೆಂಕಟರಾಜ*
*ಮಲೆನಾಡಿನ ಮಳೆ ಅವಾಂತರ*.
*ಘಟ್ಟ ಗ್ರಾಮಗಳ ಬದುಕಿನ* *ಚಿಂತನ:ಮಂಥನ.ಅಭಿಯಾನಕ್ಕೆ ಜನ* *ಸಂಕಲ್ಪ ಒಂದೇ ಇಂಧನ*.
ಮಲೆನಾಡ ಘಟ್ಟ ಪ್ರದೇಶದ ಗ್ರಾಮಗಳು ನಿರಂತರ ವರುಣ ಧಾರೆಯಲ್ಲಿ ಮೂರು ಮಾಸಗಳ ಅವಧಿಯ ಜೀವನ ದುಸ್ತರದ ಜೋತೆಗೆ ಸಾಹಸವೇ ಸರಿ.
ಸಹಜವಾಗಿ ಘಟ್ಟ ಪ್ರದೇಶದ ಗ್ರಾಮ ಜನರ ಜೀವನ, ಜೀವನೋಪಾಯಕ್ಕೆ ಪರಿಸರವನ್ನು ಮುಖ್ಯ ಪಾತ್ರ ವಹಿಸುತ್ತದೆ.
ಅ ಪರಿಸರ ಒಮ್ಮೊಮ್ಮೆ ಕೃಪ ಪೋಷಿಸಿದರೆ
ಮಗದೊಮ್ಮೆ ಅವಕೃಪೆಯು ದಯಾ ಪಾಲಿಸುವುದು.
ಸದಾಕಾಲವೂ ಹಸಿರಿನಿಂದ ಕೂಡಿದ
ಘಟ್ಟ ಪ್ರದೇಶ ಗ್ರಾಮಗಳ ಸ್ಥಳ ಭೌಗೋಳಿಕ ರೂಪ ಮತ್ತು ಬದುಕಿನ ಸದೃಶ ಚಿತ್ರಣ ನೋಡಿದರೆ ಅಲ್ಲಿಯ ಮೂಲ ಸೌಲಭ್ಯಗಳ ಕೊರತೆ ಪ್ರಾಚೀನತೆಯನ್ನು ನೆನಪಿಸುವುದು.
ಉಸಿರಿಗೆ ಅಗತ್ಯವಿದ್ದಷ್ಟು ಹಸಿರು ಇದ್ದರೂ
ಶಾಲೆ, ಸಾರಿಗೆ ಸಂಚಾರ, ವಿದ್ಯುತ್ , ಆಸ್ಪತ್ರೆ, ಇವುಗಳ ಮೂಲ ಭೂತ ಸಮಸ್ಯೆಗಳ ಕೊರತೆ ನಿತ್ಯ ಸರ್ವೇ ಸಾಮಾನ್ಯವಾಗಿ ಇದೆ.
ಹಿಗ್ಗುತಗ್ಗು ಪ್ರದೇಶ ವಾಗಿರುವ ಕಾರಣ ದಿಂದ ಆಧುನೀಕರಣದ ರಸ್ತೆ ಕಾಮಗಾರಿ ಅಸಾಧ್ಯ. ಇಲ್ಲಿನ ಗ್ರಾಮದ ಜನರ ಹೊರ ಜಗತ್ತಿನ ಸಂಪರ್ಕ ಗಳಿಗೆ ಮರದ ಮೇಲು ಸೇತುವೆ. ತೂಗು ಸೇತುವೆ, ಸುಂಕ ಸೇತುವೆ ಆಧಾರ ವಾಗಿವೆ.
ಧಾರಕಾರ ಮಳೆಯಿಂದ
ಹಿರಿ ಕಿರಿ ಜಲಪಾತಗಳ ನೀರಿನ ವೇಗವು
ಹಳ್ಳ ಕೊಳ್ಳಗಳ ಒಳ ಹರಿವು ಹೆಚ್ಚಿಸಿದಾಗ
ಜನರ ಸಂಚಾರ ಜೀವನಾಡಿ ಗಳಾದ ಮನೆ,
ಮರದ ಸೇತುವೆಗಳು ಮುಳುಗಿ ಕೊಚ್ಚಿ ಕೊಂಡು ಹೋಗುತ್ತದೆ.
ಅವಘಡದ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿ ತಾತ್ಕಾಲಿಕ ಹೊರ ಜಗತ್ತಿನ ಸಂಪರ್ಕ ಕಡಿತ ಗೊಂಡು ತಾಪತ್ರಯಗಳು ಅನುಭವಿಸುತ್ತಾರೆ.
ಇಂತಹ ಮನಕಲುಕುವ ಸಂದರ್ಭಗಳನ್ನು ಕನ್ನಡ ಸಿನಿಮಾ ಗಳಾದ ಕನಸು ನಾ. ಡಿಸೋಜ ರವರ ಕಾದಂಬರಿ ಆಧಾರಿತ,ಗಿರೀಶ್ ಕಾಸರವಳ್ಳಿ ನಿರ್ದೇಶನದ *ದ್ವೀಪ*, ಶಿವರಾಮ ಕಾರಂತರ ಆಧಾರಿತ ಟಿ. ಎಸ್ ನಾಗಾಭರಣ ನಿರ್ದೇಶನದ ಚಿಗುರಿದ ಕನಸು ಸಿನಿಮಾದಲ್ಲಿ ಅದ್ಬುತ ವಾಗಿ ತೋರಿಸಿದ್ದಾರೆ.
ಇಲ್ಲಿ ನಾವು ಗಮನಿಸಬೇಕಾದ ಬಹು ಮುಖ್ಯ ಅಂಶಗಳು,ದೈನಂದಿನ ಬದುಕಿನಲ್ಲಿ
ಹೊರ ಸಂಪರ್ಕ ಗಳಿಗಿದ್ದ ಸಂಚಾರ ಸೇತುವೆಗಳು ಜಲ ಸಮಾಧಿ ಯಾದಗ ಆಹಾರ ಪೂರೈಕೆ? ಮಕ್ಕಳ ಶಾಲೆ? ಕೆಲಸ? ಆಕಸ್ಮಿಕ ಅನರೋಗ್ಯಕ್ಕೆ ಚಿಕಿತ್ಸೆ?….
ಸರ್ಕಾರಗಳು ಪ್ರತಿ ಬಾರಿಯ ಸಮಸ್ಯೆ ಗಳೆಂದು ನಿರ್ಲಕ್ಷಿಸಿ ಶಾಶ್ವತ ಪರಿಹಾರ ಹುಡುಕುವ ನೀಡುವ ನಿಟ್ಟಿನಲ್ಲಿ ಕಾರ್ಯೊನ್ಮುಕ ವಾಗಲೇ ಇಲ್ಲ.
ಇದಕ್ಕೆ ಸಂಬಂಧಪಟ್ಟ ಸ್ಥಳೀಯ ಶಾಸಕರಾಗಲಿ, ಸರ್ಕಾರದ ಇಲಾಖೆಗಳು ಸರ್ಕಾರದ ಗಮನ ಸೆಳೆಯಲೆ ಇಲ್ಲ.
ಇಂತಹ ನರಕ ಸದೃಶ ವಿಚಾರವಾಗಿ ಚಿಂತಿಸಿದಾಗ ನನಗೆ ಹೊಳೆದದ್ದು
ಜನ ಸಮೂಹದ ವಾಗಿ ಏನಾದರೂ
ಸಮಸ್ಯೆಗೆ ಪರಿಹಾರ ಮಾಡಬಹುದು.
ಹೌದು.ಬೆಂಗಳೂರಿನಿಂದ ಮಂಗಳೂರಿಗೆ ರೈಲು ಸಂಚಾರ ಯೋಜನೆಯ ನೀಲನಕ್ಷೆಯನ್ನು ನೋಡಿದಾಗ ನನಗೆ ಸಕಲೇಶಪುರದ ಶಿರಡಿ ಘಾಟ್ ನೆನಪಿಗೆ ಬಂತು.ಅಂದಾಜು 38 ಕಿ.ಮೀ ರೈಲಿನ ಮಾರ್ಗ ಒಳಗೊಂಡಿದೆ ಶಿರಡಿ ಘಾಟ್.
ಹಿಗ್ಗುತಗ್ಗು ಪ್ರದೇಶದಲ್ಲಿ ನೇರ ರೈಲು ಸಂಚಾರಕ್ಕೆ ಮಾರ್ಗ ಸಾಧ್ಯವಾಗಿಸುವ ಕಾರ್ಯ ಕ್ಷಮತೆ ಮಲೆನಾಡಿನ ಘಟ್ಟ ಪ್ರದೇಶದಲ್ಲಿ ಸಾಧ್ಯವಿಲ್ಲ ಎಂಬುವ ತುಂಬಾ ಸೋಜಿಗ.
ನನ್ನ ಈ ಆಲೋಚನೆ ಗಮನಿಸಿ
ನಾವು 6 ಕೋಟಿ ಜನಸಂಖ್ಯೆ ಕರ್ನಾಟಕ ಕನ್ನಡಿಗರು. *ನಮ್ಮ ರಾಜ್ಯ ನಮ್ಮ ಜನ*(our state our people) ಎಂಬ ಶೀರ್ಷಿಕೆಯಡಿ ಅಭಿಯಾನ ಪ್ರಾರಂಭಿಸಿ,
ಒಟ್ಟು ಕನ್ನಡ ಕಣ್ಮಣಿ ಗಳಾದ ನಾವುಗಳು
ನಮ್ಮ ನಮ್ಮ ಜನ್ಮದಿನದ ಆಚರಣೆ ಭಾಗದ
ಒಟ್ಟು ಖರ್ಚಿನ ಮೌಲ್ಯದಲ್ಲಿ ಶೇಕಡಾ 10%
ನಮ್ಮ *ರಾಜ್ಯ ನಮ್ಮ ಜನ ಅಭಿಯಾನದ* ನಿಧಿ ಗೆ ಜಮೆಗೊಳಿಸಿದರೆ ವರ್ಷದ ಅಂತ್ಯದಲ್ಲಿ ಸಂಗ್ರಹದ ಮೊತ್ತವನ್ನು ಮಲೆನಾಡ ಘಟ್ಟ ಪ್ರದೇಶದಗಳ ಅಭಿವೃದ್ಧಿ ಮತ್ತು ನೆರೆ ಪೀಡಿತರಿಗೆ ಬಳಸಿಕೊಳ್ಳುವುದು. ಇದಕ್ಕೆ ಪ್ರತ್ಯೇಕ ನಿರ್ವಹಣೆಗೆ infrastructure development ಅಗತ್ಯವಿದ್ದು ಕಾನೂನು ನಿಯಮಗಳ ಅಡಿಯಲ್ಲಿ ಸ್ಥಾಪಿಸತಕ್ಕದ್ದು.
ಇದು ನನ್ನ 6 ವರ್ಷಗಳಿಂದ ಪರಿತಪಿಸುತ್ತಿರುವ ಮಹತ್ವಾಕಾಂಕ್ಷೆಯ ಕನಸು.
ಜೈ ಕರ್ನಾಟಕ
ದಯವಿಟ್ಟು ಈ ವಿಚಾರವನ್ನು ಶೇರ್ ಮಾಡಿ
✍ *ವೆಂಕಟರಾಜ*

ಕರಾವಳಿಯ ಮಣ್ಣಿನ ವಾಸನೆಗೆ ಜಗತ್ತೇ ಫಿದಾ: ಸ್ಯಾಂಡಲ್ವುಡ್ನಲ್ಲಿ ಕರಾವಳಿ ಸಿನಿಮಾಗಳ ಹೊಸ ಶಕೆ!
ವಿದ್ಯಾರ್ಥಿಗಳ ಹೋರಾಟಕ್ಕೆ ಬಿಗ್ ಸಕ್ಸಸ್: ಶಿಕ್ಷಣ ಸಚಿವರ ರಾಜೀನಾಮೆ, ಬೀದಿಗಿಳಿದು ಸಂಭ್ರಮಿಸಿದ ಯುವಜನತೆ!
ಜನಾ ನಾಯಕನ್ ಮೊದಲ ದಿನದ ಕಲೆಕ್ಷನ್: ದಳಪತಿ ವಿಜಯ್ ಅವರ ಕೊನೆಯ ಚಿತ್ರದ ಬೃಹತ್ ಓಪನಿಂಗ್, ವಿಶ್ವಾದ್ಯಂತ ₹78 ಕೋಟಿ ಗಳಿಕೆ!
ಕರಾವಳಿಯ ಮಣ್ಣಿನ ವಾಸನೆಗೆ ಜಗತ್ತೇ ಫಿದಾ: ಸ್ಯಾಂಡಲ್ವುಡ್ನಲ್ಲಿ ಕರಾವಳಿ ಸಿನಿಮಾಗಳ ಹೊಸ ಶಕೆ!
By venkat raj
ಚಾಮರಾಜನಗರದ ಪ್ರತಿಭಾನ್ವಿತ ಕಲಾವಿದ ನಟ ಪ್ರವೀಣ್ ಮತ್ತು 'ರೆಟ್ರೋ ರೋಮಿಯೋ' ಜಾದೂ
By Sachin Raj
ಜನಾ ನಾಯಕನ್ ಮೊದಲ ದಿನದ ಕಲೆಕ್ಷನ್: ದಳಪತಿ ವಿಜಯ್ ಅವರ ಕೊನೆಯ ಚಿತ್ರದ ಬೃಹತ್ ಓಪನಿಂಗ್, ವಿಶ್ವಾದ್ಯಂತ ₹78 ಕೋಟಿ ಗಳಿಕೆ!
By Sachin Raj
Ramayana Movie Postponed: Nitesh Tiwari’s Magnum Opus Delayed – Here Is Everything You Need to Know
By Ganesh Photopedia
ಕಣ್ಣಿಗೆ ಮೋಹಕ ವಾದ ಮನಮೋಹಕ ಸಾಂಗ್ ಗೆ ಫಿದಾ ಆದ ಅಭಿಮಾನಿಗಳು
By Sachin Raj
ಎಲ್ಲಾ ವಿಘ್ನಗಳೂ ಅಂತ್ಯ: ಜುಲೈ 23ಕ್ಕೆ ಬೆಳ್ಳಿಪರದೆಗೆ ಅಪ್ಪಳಿಸಲಿದ್ದಾನೆ 'ಜನನಾಯಕ'!
By rsachin865@gmail.com
yash toxic and bgmi
By manzamarketing173@gmail.com
ಕಾಕ್ರೋಚ್ ಪಾರ್ಟಿ’ ಟ್ರೆಂಡ್: ಜೆನ್ ಜಿ (Gen Z) ಯೂತ್ಸ್ನ ಈ ಹೊಸ ಹುಚ್ಚಾಟದ ಹಿಂದಿರುವ ಅಸಲಿ ಕಥೆಯೇನು
By venkat raj
No School Bag Day
By venkat raj
cow-sheep-farming-rural-economy-karnataka
By manzamarketing173@gmail.com
yash toxic and bgmi
By manzamarketing173@gmail.com




💬 Reader Discussion