00:00:00
TRENDING LATEST UPDATES BIG STORY
Published: ⏱️ 04 Jul 2026, 02:12 PM IST | By manzamarketing173@gmail.com (Writer)

ಹಸು, ಕುರಿ, ಮೇಕೆ?

ಗೂಗಲ್ ಡಿಸ್ಕವರ್ ಬ್ಯಾನರ್ ವಿನ್ಯಾಸ
ವೆಂಕಟರಾಜ
Venkataraja
ಹಸು ಮತ್ತು ಕುರಿ ಬ್ಯಾನರ್
ಅಮೆಜಾನ್ ಅಫಿಲಿಯೇಟ್ ಪ್ರಾಡಕ್ಟ್ ವಿಜೆಟ್
Product Image

GoSriKi Women’s Cotton Ikat Print Kurta Set | Soft Fabric | Stylish Ethnic Suit

₹2,599₹409
Buy on Amazon
ಹಸು, ಕುರಿ, ಮೇಕೆ: ದೂರದೃಷ್ಟಿ ಹಾಯಿಸಿದಾಗ
ಲೇಖನ | ಲೇಖಕ: ವೆಂಕಟರಾಜ

ಹಸು, ಕುರಿ, ಮೇಕೆ

ದೂರದೃಷ್ಟಿ ಹಾಯಿಸಿದಾಗ

ಜಾನುವಾರುಗಳು ಮತ್ತು ಮನುಷ್ಯರ ನಡುವಿನ ಸಂಬಂಧದ ರಚನೆ ಪರಿಯ ಬಗ್ಗೆ ಜಿಜ್ಞಾಸುನಾದಗ ಇದೊಂದು ದೈವ ಸೃಷ್ಟಿಯ ಸ್ವಾರಸ್ಯಕರವೇ ಸರಿ ಎಂದು ಆಧ್ಯಾತ್ಮಿಕತೆ ಯಲ್ಲಿ ಲೀನವಾಯಿತು ಭಾವ.

“ಕುರಿ ಇಲ್ಲದೆ ಕುಲವಿಲ್ಲ, ಹಸುವಿನ ಹಾಲಿಲ್ಲದ ಮನೆಯಿಲ್ಲ, ಆಡು ಮುಟ್ಟದ ಸೊಪ್ಪುಗಳಿಲ್ಲ. ಒಟ್ಟಾರೆ ಹಳ್ಳಿಗರ ಬದುಕಿಲ್ಲ.”

ಇವುಗಳ ಸಾಕಾಣಿಕೆ, ಪೋಷಣೆ, ದೈನಂದಿನ ಬದುಕಾದರು ಇವುಗಳು ಕಷ್ಟಕರ ಸಮಯದಲ್ಲಿ ಹಣ ಒದಗಿಸುವ ಆಪತ್ಬಂದವರು. ಹೈನುಗಾರಿಕೆ, ಕುರಿ, ಮೇಕೆ ಮಾರಟ, ಒಂದು ರೀತಿಯಲ್ಲಿ ಸಾಕಣಿಕದಾದರಿಗೆ ATM (ನಿಶ್ಚಿತ ಠೇವಣಿ) ಇದ್ದಹಾಗೆ.

ದೇಶದ ಆರ್ಥಿಕತೆಗೆ ಬಹುಪಾಲು ಆದಾಯ ನೀಡುತ್ತಿದೆ. ಇದನ್ನು ಮನಗಂಡು ಸರ್ಕಾರಗಳು ವಿಶೇಷ ಯೋಜನೆಗಳ ಮುಖಾಂತರ ಸಾಕಾಣಿಕ ದಾರರಿಗೆ ಧನಸಹಾಯ ನೀಡುತ್ತಿದ್ದಾರೆ. ಉದಾಹರಣೆಗೆ: ಕುರಿಮೃತ ಪಟ್ಟರೆ ಅನುಗ್ರಹ ಯೋಜನೆಯಡಿ ಐದು ಸಾವಿರ ಪರಿಹಾರ ಧನ, ಹಸುವಿನ ಲೋನ್, ನಮ್ಮ ಕರ್ನಾಟಕ ರಾಜ್ಯ ಸರ್ಕಾರದ ಕೊಡುಗೆಗಳು.

ಪ್ರಮುಖ ಅಂಶಗಳನ್ನು ಗಮನಿಸಿ

ಬದಲಾದ ಕಾಲಘಟ್ಟ ಗಳನ್ನು ವಿಂಗಡಿಸಿ ಅವಲೋಕಿಸಿದಾಗ ನನ್ನ ಅರಿವು ಮತ್ತು ಕಂಡ ಸತ್ಯ, ಪ್ರಸ್ತುತ ವ್ಯವಸಾಯದ ಬೆಳವಣಿಗೆ ಉದಾಹರಣೆ ಹತ್ತೂರಿಗೆ ಒಂದು ತೋಟ ಎಂಬಂತೆ ಇದ್ದ ಕಾಲ, ಈಗ ಒಂದು ಹಳ್ಳಿಯಲ್ಲಿ ಹತ್ತು ತೋಟ, ಎಂಬ ಕಾಲದ ಉಡುಗೊರೆಯ ಬಗ್ಗೆ ಒಬ್ಬ ರೈತನ ಮಗನಾದ ನನಗೆ ಖುಷಿ ವಿಚಾರ.

ವ್ಯವಸಾಯದಿಂದ ವಿಮುಖರಾಗಿ, ಮುಂದಿನ ರೈತ ಪೀಳಿಗೆಯ ಅಭಾವ تಲೆದೋರಿದ ಸಂಕಷ್ಟದ ಸಮಯಕ್ಕೆ, ಕರೋನ ಅಲೆ ಅನೇಕರ ಮನಗಳಲ್ಲಿ ಹೊಸ ಕೃಷಿ ಕ್ರಾಂತಿ ಗೆ ನಾಂದಿ ಹಾಡಿದೆ. ಹೀಗೆ ದುಡಿಮೆ ನಿಮಿತ್ತ ಹಳ್ಳಿ ತೊರೆದ ಯುವ ಮಂದಿಯ ಪುನಃ ವಾಪಸಾತಿ ಯಿಂದ, ಮತ್ತಷ್ಟು ತೋಟಗಾರಿಕೆ ಹೆಚ್ಚಳ ವಾಗುವುದರಲ್ಲಿ “ಸಂದೇಹವಿಲ್ಲ”.

ಆತಂಕದ ವಿಚಾರವೆಂದರೆ, ಮುಂದುವರಿದ ತೋಟಗಾರಿಕೆ ಗಳಿಂದ ಜಮೀನು, ಗದ್ದೆ ಗಳಿಗೆ ಬೇಲಿ ಬಿದ್ದಾಗ, ಕಾಲನುಸಾರ ನಿತ್ಯ ಕುರಿ, ಮೇಕೆಗಳಿಗೆ ಮೇವು ಒದಗಿಸುತ್ತಿದ್ದ ಖುಷ್ಕಿ ಭೂಮಿ ಕಡಿಮೆಗೊಂಡು ಕುರಿ, ಮೇಕೆ ಸಾಕಾಣಿಕ ದಾರರಿಗೆ ಪರ್ಯಾಯ ಮಾರ್ಗ ಇಲ್ಲವಾಗುತ್ತದೆ. ನಾನು ಇಲ್ಲಿ ತೋಟಗಾರಿಕೆ ಅಭಿವೃದ್ಧಿಯನ್ನು ದೂರುತಿಲ್ಲ. ಬದಲಾಗಿ ಸರ್ಕಾರಗಳು ಈ ಸಾಮನ್ಯ ವಿಷಯವನ್ನು ಗ್ರಹಿಸದೆ ಅಧಿಕಾರಶಾಹಿ ಗಳು ಗೋಮಾಳ, ನೆಡುತೋಪು,”ಗುಂಡುತೋಪು”, ದೇವರ ಕಾಡು, ಇತರೆ….. ಭೂಮಿಯನ್ನು ಹೆಚ್ಚಿಸುವ ಬದಲಾಗಿ, ನುಂಗುವ ಭೂ ಮಾಫಿಯಾದಲ್ಲಿ ತೊಡಗಿರುವರು.

ಎಚ್ಚೆತ್ತುಕೊಂಡು ಈ ಅಂಶವನ್ನು ಗಂಭೀರವಾಗಿ ಪರಿಗಣಿಸದೆ ಬಿಟ್ಟಲ್ಲಿ ಮುಂದಿನ ಹತ್ತು ವರ್ಷಗಳಲ್ಲಿ ಮೇವಿನ …ಹಾಹಾಕಾರದ ವಿಷಮ ಪರಿಸ್ಥಿತಿ ಎದುರಾಗಿ ಸರ್ಕಾರಕ್ಕೆ ಮೇಕೆ, ಕುರಿಗಾಯಿಗಳ ಕೀರುವ ದ್ವನಿ ಕೇಳದೇ ಇರದು. ಕುರಿ, ಮೇಕೆ ಗಳ, ಅವಸನ ದಿಂದ ತನ್ನದೇ ಪ್ರಭಾವ ಹೊಂದಿರುವ ಆರ್ಥಿಕ ವ್ಯವಸ್ಥೆ ಮೇಲೂ ಬಿಸಿ ತಟ್ಟದೆ ಇರದು. ಮುಂದಿನ ಆಗುಹೋಗುಗಳ ದೂರದೃಷ್ಟಿಯ ಚಿಂತನೆಯಿಂದ ಕುರಿ, ಮೇಕೆ, ಸಮುದಾಯ ದವರಿಗೆ ಹೆಚ್ಚುವರಿ ಭೂಮಿಯನ್ನು ಮೀಸಲಿಟ್ಟು ಕುರಿ, ಮೇಕೆ, ಜಾನುವಾರುಗಳ, ಹಕ್ಕುಗಳನ್ನು ರಕ್ಷಿಸಬೇಕು.

ಹೊಸ ಆವತರಣಿಕೆಯಂತೆ ಕುರಿ Farm, ಮೇಕೆ Farm, ಎಂಬ Trend ಉದ್ಯಮ ಸ್ವರೂಪ ಪಡೆದು ಯುವಕರನ್ನು ಆಕರ್ಷಿಸುತ್ತಿದೆ. ಸರ್ಕಾರ ಇದನ್ನು ಕಿರು ಉದ್ಯಮ ಎಂದು ಪರಿಗಣಿಸಿ ಮುದ್ರಾ ಮಾದರಿಯಲ್ಲಿ ಪ್ರತ್ಯೇಕ ಸಾಲ ಸೌಲಭ್ಯ ಕಲ್ಪಿಸಿ ಆಸಕ್ತರ ಸ್ವಾವಲಂಬಿ ಜೀವನಕ್ಕೆ ಸಹಕಾರಿಯಾಗಬೇಕು.

ವಾನರ ರಿಲ್ಲದ ರಾಮನ ಪ್ರಪಂಚ
ಜಾನುವಾರು ಗಳಿಲ್ಲದ ಈ ಪ್ರಪಂಚ
ಅಸಂಪೂರ್ಣ.
ವೆಂಕಟರಾಜ

💬 Reader Discussion
ಕರಾವಳಿಯ ಮಣ್ಣಿನ ವಾಸನೆಗೆ ಜಗತ್ತೇ ಫಿದಾ: ಸ್ಯಾಂಡಲ್‌ವುಡ್‌ನಲ್ಲಿ ಕರಾವಳಿ ಸಿನಿಮಾಗಳ ಹೊಸ ಶಕೆ!
By venkat raj Read Story →
​ಚಾಮರಾಜನಗರದ ಪ್ರತಿಭಾನ್ವಿತ ಕಲಾವಿದ ನಟ ಪ್ರವೀಣ್ ಮತ್ತು 'ರೆಟ್ರೋ ರೋಮಿಯೋ' ಜಾದೂ
By Sachin Raj Read Story →
ವಿದ್ಯಾರ್ಥಿಗಳ ಹೋರಾಟಕ್ಕೆ ಬಿಗ್ ಸಕ್ಸಸ್: ಶಿಕ್ಷಣ ಸಚಿವರ ರಾಜೀನಾಮೆ, ಬೀದಿಗಿಳಿದು ಸಂಭ್ರಮಿಸಿದ ಯುವಜನತೆ!
By Sachin Raj Read Story →
ಜನಾ ನಾಯಕನ್ ಮೊದಲ ದಿನದ ಕಲೆಕ್ಷನ್: ದಳಪತಿ ವಿಜಯ್ ಅವರ ಕೊನೆಯ ಚಿತ್ರದ ಬೃಹತ್ ಓಪನಿಂಗ್, ವಿಶ್ವಾದ್ಯಂತ ₹78 ಕೋಟಿ ಗಳಿಕೆ!
By Sachin Raj Read Story →